ಟಿಕೆಟ್ ದರ ಏರಿಕೆಯ ಬಗ್ಗೆ ಪ್ರಯಾಣಿಕರ ಗಮನಕ್ಕೆ ಪತ್ರಿಕಾ ಪ್ರಕಟಣೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ:ಕೇಂದ್ರ ಕಛೇರಿ: ಬೆಂಗಳೂರು ಪತ್ರಿಕಾ ಪ್ರಕಟಣೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಒಟ್ಟು 6,514 ಅನುಸೂಚಿಗಳನ್ನು ಹೊಂದಿದ್ದು, 83,648 ಸುತ್ತುವಳಿಗಳನ್ನು ನಗರ/ಹೊರ ವಲಯ ವ್ಯಾಪ್ತಿಯಲ್ಲಿ ಪ್ರತಿ ದಿನ ಆಚರಣೆ ಮಾಡುತ್ತಿದ್ದು, ಪ್ರತಿ ದಿನ ಸುಮಾರು 52 ಲಕ್ಷ ಪ್ರಯಾಣಿಕರು ಬೆಂಮಸಾಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದೇ ಸಂಸ್ಥೆಯ ಧ್ಯೇಯವಾಗಿರುತ್ತದೆ. ಭಾರತ ಸರ್ಕಾರವು ಪ್ರತಿ ತಿಂಗಳು ಲೀಟರಿಗೆ 60 ಪೈಸೆಯಂತೆ ಇಂಧನ ದರಗಳನ್ನು ಹೆಚ್ಚಳ ಮಾಡುತ್ತಿದ್ದು, ಇದರಿಂದ ಸಂಸ್ಥೆಯ ಮೇಲೆ ಹೆಚ್ಚಿನ ಆಕ ಹೊರೆ ಬೀಳುತ್ತಿದೆ. ನಂದಿನ ಕಾರ್ಯಚರಣೆ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಹಾಗೂ ಸಾರಿಗೆ ಆದಾಯವನ್ನು ಹೆಚ್ಚಿಸಲು ಈ ಕೆಳಕಂಡ ಅಂಶಗಳನ್ನು ಸಾರ್ವಜನಿಕ ಪ್ರಯಾಣಿಕರ ಗಮನಕ್ಕಾಗಿ ತರಲಾಗಿದೆ :- 1. ಬೆಂಮಸಾಸಂಸ್ಥೆಯಲ್ಲಿ ಪ್ರಯಾಣದ ದೂರವನ್ನು ಪ್ರತಿ 2 ಕಿ.ಮೀಗೆ 01 ಹಂತ ಎಂದು ಪರಿಗಣಿಸಲಾಗುತ್ತಿದೆ. ಆಯಾಯಾ ಮಾರ್ಗದ ಹಂತವಾರು ವಿವರಗಳು ನಿರ್ವಾಹಕರ ಬಳಿ ಲಭ್ಯವಿರುತ್ತದೆ. ಪ್ರಯಾಣಿಕರು ಹಂತ ತಲುಪುವ ಮುನ್ನ ಟಿಕೇಟ್ ಪಡೆಯುವುದು. 2. ಪ್ರಯಾಣಿಕರು ನಿರ್ವಾಹಕರಿಗೆ ನಿಗಧಿತ ಪ್ರಯಾಣ ದರವನ್ನು ನೀಡಿ, ಅಧಿಕೃತ ಟಿಕೇಟು/ನಂದಿನ ಪಾಸು ಪಡೆದು ಪ್ರಯಾಣಿಸುವಂತೆ ಕೋರಲಾಗಿದೆ. 3. ಬೆಂಮಸಾಸಂಸ್ಥೆಯ ವಾಹನಗಳಲ್ಲಿ ಅಧಿಕೃತ ಟಿಕೇಟು/ನಂದಿನ ಪಾಸು/ಮಾಸಿಕ ಪಾಸು ಹೊಂದದೆ ಪ್ರಯಾಣಿಸುವುದು ಅಪರಾಧ. ಟಿಕೇಟು ರಹಿತ ಪ್ರಯಾಣಿಕರು ವಾಸ್ತವಿಕ ಪ್ರಯಾಣ ದರದ 10 ಪಟ್ಟು (ಬಸ್ ಟ್ರಿಪ್ ಪ್ರಾರಂಭಿಸುವ ಸ್ಥಳದಿಂದ ಟಿಕೇಟು ರಹಿತ ಪ್ರಯಾಣಿಕನು ಸಿಕ್ಕಿಹಾಕಿಕೊಳ್ಳುವ ಸ್ಥಳದವರೆಗಿನ ಪ್ರಯಾಣಕ್ಕೆ ಅಧಿಕೃತವಾಗಿ ವಿಧಿಸುವ ಪ್ರಯಾಣ ಶುಲ್ಕವಾಗಿರುತ್ತದೆ.) ಅಥವಾ ರೂ. 500/- ಇವೆರಡರ ಪೈಕಿ ಕಡಿಮೆ ಇರುವ ಮೊತ್ತವನ್ನು ಪ್ರಯಾಣಿಕನು ಕಲಂ 178, ಮೋಟಾರು ವಾಹನ ಕಾಯ್ದೆ 1988 ರನ್ವಯ ದಂಡ ತೆರಬೇಕಾಗುವುದು. 4. ಸಂಸ್ಥೆಗೆ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಿ ಸಾರಿಗೆ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ದಿನ 40 ಕ್ಕಿಂತ ಹೆಚ್ಚು ಮಾರ್ಗ ತನಿಖಾ ಸಿಬ್ಬಂದಿಗಳ ತಂಡಗಳನ್ನು ರಚಿಸಿ, ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದುದರಿಂದ, ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟು/ದಿನದ ಪಾಸು/ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸತಕ್ಕದ್ದು ಹಾಗೂ ತನಿಖಾ ಸಿಬ್ಬಂದಿ ಕೇಳಿದಾಗ ಅವುಗಳನ್ನು ತೋರಿಸಲು ವಿನಂತಿಸಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಬಿ.ಎಂ.ಟಿ.ಸಿ ಕಾಲ್ ಸೆಂಟರ್ ನಂ:155220/www.mybmtc.com ಗೆ ನೀಡಬಹುದಾಗಿದೆ. ಸಹಿ/- ದಿನಾಂಕ:04.02.2014 ವ್ಯವಸ್ಥಾಪಕ ನಿರ್ದೇಶಕರು.
ಕನ್ನಡ