ವಾಯುವಜ್ರ ಮಾರ್ಗಸಂಖ್ಯೆ ಬಿಐಎಎಸ್-1 ಅನ್ನು ರದ್ದುಪಡಿಸಿರುವ ಕುರಿತು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

 ಕೇಂದ್ರ ಕಛೇರಿ::ಬೆಂಗಳೂರು

       ಸಂಖ್ಯೆ:ಬೆಂಮಸಾಸಂ/ಕೇಕ/ಸಂವ್ಯ/ಆ/  2301 /2013-14         ದಿನಾಂಕ: 24/09/2013

ಸಂಪಾದಕರು,

ಬೆಂಗಳೂರು,

ಮಾನ್ಯರೇ,

ವಿಷಯ: ವಾಯುವಜ್ರ ಮಾರ್ಗಸಂಖ್ಯೆ ಬಿಐಎಎಸ್-1 ಅನ್ನು ರದ್ದುಪಡಿಸಿರುವ ಕುರಿತು.

                          ******

      ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಾಯುವಜ್ರ ಮಾರ್ಗಸಂಖ್ಯೆ BIAS-1 ಅನ್ನು ಬ್ರಿಗೇಡ್ ಗೇಟ್ ವೇ ಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನಾಂಕ 22.07.2013 ರಿಂದ ಆಚರಣೆಮಾಡುತ್ತಿದ್ದು, ಸದರಿ  ಮಾರ್ಗದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರ ಪ್ರೊತ್ಸಾಹವಿಲ್ಲದೆವಿರುವುದರಿಂದ ದಿನಾಂಕ 25.09.2013 ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿರುತ್ತದೆ.

ಈ ಮೇಲ್ಕಂಡ ವಿಷಯವನ್ನು ತಮ್ಮ ಅಮೂಲ್ಯವಾದ ದಿನಪತ್ರಿಕೆಯಲ್ಲಿ ಸಾರ್ವಜನಿಕ ಪ್ರಯಾಣಿಕರ ಮಾಹಿತಿಗಾಗಿ ಪ್ರಕಟಿಸಲು ಕೋರಲಾಗಿದೆ.

 

                                                                                                      -ಸಹಿ- 

                ಪ್ರಧಾನ ವ್ಯವಸ್ಥಾಪಕರು(ಸಂಚಾರ)

                                                                                                ಬೆಂ.ಮ.ಸಾ.ಸಂಸ್ಥೆ

ಕನ್ನಡ