ಬೆಂಮಸಾಸಂಸ್ಥೆ ವತಿಯಿಂದ 2013-14 ನೇ ಸಾಲಿನ ವಿದ್ಯಾಪಾಸುಗಳ ವಿತರಣೆ ಬಗ್ಗೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ : ಕೇಂದ್ರ ಕಛೇರಿ : ಬೆಂಗಳೂರು

ಸಂಖ್ಯೆ : ಬೆಂ..ಸಾ.ಸಂಸ್ಥೆ : ಕೇಕ: ಸಂವ್ಯ: : 605: 2013-13         ದಿನಾಂಕ : 29 -05-2013

 

ಸಂಪಾದಕರು,

ಬೆಂಗಳೂರು.

ಮಾನ್ಯರೇ,

 ವಿಷಯ : ಬೆಂಮಸಾಸಂಸ್ಥೆ ವತಿಯಿಂದ 2013-14 ನೇ ಸಾಲಿನ ವಿದ್ಯಾಪಾಸುಗಳ ವಿತರಣೆ ಬಗ್ಗೆ.

          *******

 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 2013-14 ನೇ ಸಾಲಿನ ವಿದ್ಯಾಪಾಸು ವಿತರಣಾ ಪ್ರಕ್ರಿಯೆಯನ್ನು ಹಂತ ಹಂತವಾಗಿ ಪ್ರಾರಂಭಿಸಲಿದೆ. ವಿದ್ಯಾಗಳು ಪಾಸ್ ವಿತರಣಾ ಕೇಂದ್ರಗಳಲ್ಲಿ ಯಾವುದೇ ಕಿರಿಕಿರಿಯಿಲ್ಲದೇ ಪಾಸು ಪಡೆಯಲು ಅನುಕೂಲವಾಗುವಂತೆ ಕೆಳಕಂಡ ವೇಳಾಪಟ್ಟಿಯಂತೆ ವಿವಿಧ ವರ್ಗದ ವಿದ್ಯಾಗಳಿಗೆ ಪಾಸ್ ವಿತರಣೆ ಪ್ರಾರಂಭಿಸಲಿದೆ.

ಪಾಸಿನ ವರ್ಗ

ವಿತರಣೆ ಪ್ರಾರಂಭಿಸುವ ದಿನಾಂಕ

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಡಶಾಲೆ ವಿದ್ಯಾಗಳಿಗೆ

 6 ನೇ ಜೂನ್ 2013 ರಿಂದ

ಪ್ರಥಮ & ದ್ವಿತೀಯ ಪಿಯುಸಿ ವಿದ್ಯಾಗಳಿಗೆ

12 ನೇ ಜೂನ್ 2013 ರಿಂದ

ಪದವಿ, ಸ್ನಾತಕೊತ್ತರ, ತಾಂತ್ರಿಕ, ವೈದ್ಯಕೀಯ ಮತ್ತು ಸಂಜೆ ಕಾಲೇಜು

5ನೇ ಜುಲೈ 2013 ರಿಂದ

ಈ ಪಾಸುಗಳನ್ನು ಬೆಳಿಗ್ಗೆ 0800 ಗಂಟೆಯಿಂದ ಸಂಜೆ 0500 ಗಂಟೆಯವರೆಗೆ ಎಲ್ಲಾ ಕೆಲಸದ ದಿನಗಳಲ್ಲಿ (ಭಾನುವಾರ &ರಜಾ ದಿನಗಳನ್ನು ಹೊರತುಪಡಿಸಿ) ಬೆಂಗಳೂರು ನಗರದಾದ್ಯಂತ ವಿಸ್ತರಿಸಿರುವ ಈ ಕೆಳಕಂಡ 36 ಪಾಸ್ ವಿತರಣಾ ಕೇಂದ್ರಗಳಲ್ಲಿ ವಿತರಿಸಲಾಗವುದು. ( ಆದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಮತ್ತು ಫ್ರೌಢಶಾಲಾ ವಿದ್ಯಾಗಳ ಪಾಸುಗಳನ್ನು ರಜಾ ದಿನವಾದ ದಿನಾಂಕ:08.06.2013 & 09.06.2013 ರಂದು ವಿತರಿಸಲಾಗುವುದು.)

ಪಾಸ್ ವಿತರಣಾ ಕೇಂದ್ರಗಳು :

ಕೆಂಪೆಗೌಡ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಇಂದಿರಾನಗರ(ಟಕ-6), ದೊಮ್ಮಲೂರು, ಜೀವನಭೀಮಾನಗರ, ಕೆ.ಆರ್.ಪುರಂ, ಕಲ್ಯಾಣನಗರ, ಕಾವಲ್ಬೈರಸಂದ್ರ ಬಸ್ ನಿಲ್ದಾಣ, ಬಸವೇಶ್ವರ ನಗರ, ವಿಜಯನಗರ, ಚಂದ್ರಾ ಲೇಔಟ್, ಎಂಸಿಟಿಸಿ, ಕುಮಾರಸ್ವಾಮಿ ಲೇಔಟ್, ಕೆಂಗೇರಿ ಟಿಟಿಎಂಸಿ,ನೀಲಸಂದ್ರ ಬ.ನಿ, ಹಂಪಿನಗರ, ನಂದಿನಿ ಲೇಔಟ್, ನೆಲಮಂಗಲ, ಚೌಡೇಶ್ವರಿ ಬ.ನಿ, ವಿದ್ಯಾರಣ್ಯಪುರ, ಯಲಹಂಕ 5ನೇ ಹಂತ, ರಾಜಾಜಿನಗರ 1ನೇ ಕಎನ್ಕಿ ಬ್ಲಾಕ್, ಮಲ್ಲೇಶ್ವರಂ ಬಸ್ ನಿಲ್ದಾಣ(18ನೇ ಕ್ರಾಸ್), ಜಯನಗರ ಟಿಟಿಎಂಸಿ, ಚನ್ನಮನಕೆರೆ ಅಚ್ಚುಕಟ್ಟು, ಬಿಟಿಎಂ ಲೇಔಟ್ ಬ.ನಿ, ಎಲೆಕ್ಟ್ರಾನಿಕ್ ಸಿಟಿ(ಟಕ-19), ಕೋರಮಂಗಲ ಟಿಟಿಎಂಸಿ, ಕೃ.ರಾ.ಮಾರುಕಟ್ಟೆ, ಯಶವಂತಪುರ ಟಿಟಿಎಂಸಿ, ಕಾಡುಗೋಡಿ, ಬನಶಂಕರಿ ಟಿಟಿಎಂಸಿ, ಬನ್ನೇರುಟ್ಟ ಟಿಟಿಎಂಸಿ, ಉತ್ತರಹಳ್ಳಿ ಮತ್ತು ಚಂದಾಪುರ.ಸಂಸ್ಥೆಯು ಪ್ರಮುಖ ಬಸ್ ನಿಲ್ದಾಣಗಳಲ್ಲಿ ದಿನಾಂಕ:31.05.2013 ರಿಂದ ವಿದ್ಯಾಗಳಿಗೆ ರಿಯಾಯ್ತಿ ಬಸ್ ಪಾಸ್ ಪಡೆಯುವ ಸಂಬಂದ ಉಚಿತವಾಗಿ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಅರ್ಜಿಯ ಜೆರಾಕ್ಸ್ ಪ್ರತಿ, ಬೆಂಮಸಾಸಂಸ್ಥೆಯ ವೆಬ್ಸೈಟ್ನಿಂದ(www.mybmtc.com)ಮುದ್ರಣತೆಗೆದ ಅರ್ಜಿಗಳು ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾದ ಅರ್ಜಿಗಳನ್ನು ಸಹ ಮಾನ್ಯ ಮಾಡಲಾಗುವುದು (ಅರ್ಜಿ ಪ್ರತಿಯನ್ನು ಲಗತ್ತಿಸಿದೆ).

ವಿದ್ಯಾಗಳು ಅರ್ಜಿಯ ಜೊತೆಯಲ್ಲಿ

  • ಪ್ರಸ್ತುತ ಸಾಲಿನ ಶಾಲೆಯಲ್ಲಿ ಶುಲ್ಕ ಪಾವತಿಸಿರುವ ಅಸಲಿ ರಸೀದಿ(ಸರ್ಕಾರಿ ಶಾಲೆಯ ವಿದ್ಯಾಗಳಿಗೆ ವಿನಾಯ್ತಿ ಇದೆ),
  • ಕಾಲೇಜು/ಶಾಲೆಯಲ್ಲಿ ವಿತರಿಸಿರುವ ಗುರುತಿನ ಚೀಟಿ
  • ಇತ್ತೀಚಿನ ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು.
  • ನಿಗದಿತ ಪಾಸಿನ ಮೊತ್ತದೊಂದಿಗೆ ಸಲ್ಲಿಸತಕ್ಕದ್ದು.

ಸಂಸ್ಥೆಯು ವಿದ್ಯಾಸಮುದಾಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ವರ್ಷದ ದರಗಳನ್ನೇ 2013-14ನೇ ಸಾಲಿಗೆ ನಿಗಧಿಪಡಿಸಿರುತ್ತದೆ, ದರಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ವಿದ್ಯಾರಿಯಾಯಿತಿ ಪಾಸುಗಳ ದರಗಳ ವಿವರ ಈ ಕೆಳಕಂಡಂತಿವೆ.

ಕ್ರಮ ಸಂಖ್ಯೆ

ವರ್ಗ

ಅವಧಿ

ಪ್ರಯಾಣ ಶುಲ್ಕ

ಸೇವಾ ಶುಲ್ಕ

ಒಟ್ಟು ದರ

1.

ಪ್ರಾಥಮಿಕ ಶಾಲಾ ವಿದ್ಯಾಗಳಿಗೆ

10 ತಿಂಗಳಿಗೆ

ಉಚಿತ

70

70

    2.ಪ್ರೌಢಶಾಲಾ ವಿದ್ಯಾಗಳಿಗೆ (ಹುಡುಗರಿಗೆ)10 ತಿಂಗಳಿಗೆ60070670
 ಪ್ರೌಢಶಾಲಾ ವಿದ್ಯಾಗಳಿಗೆ (ಹುಡುಗಿಯರಿಗೆ)10 ತಿಂಗಳಿಗೆ40070470
3.ವೃತಿಪರ ಕಾಲೇಜು (ಐಟಿಐ, ಡಿಪ್ಲೊಮ, ನರ್ಸಿಂಗ್, ಬಿ ಡ್ ಇತ್ಯಾದಿ)6 ತಿಂಗಳಿಗೆ57570645
12 ತಿಂಗಳಿಗೆ1150701220
4.ತಾಂತ್ರಿಕ ಮತ್ತು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ5 ತಿಂಗಳಿಗೆ70070770
10 ತಿಂಗಳಿಗೆ1400701470
12 ತಿಂಗಳಿಗೆ1680701750
5.ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ5 ತಿಂಗಳಿಗೆ60070670
10 ತಿಂಗಳಿಗೆ1200701270
12 ತಿಂಗಳಿಗೆ1480701550

 

ಇಚ್ಚೆ ಬಂದಂತೆ ಪ್ರಯಾಣಿಸುವ ಪಾಸಿನ ದರಗಳು :

ವರ್ಗ

ಸೇವಾ ಶುಲ್ಕ ರೂ.70/- ಸೇರಿ *

 

5 ತಿಂಗಳಿಗೆ

10 ತಿಂಗಳಿಗೆ

12 ತಿಂಗಳಿಗೆ

ನಗರ ವಲಯ

ರೂ.1885/-

ರೂ.3695/-

ರೂ.4420/-

ನಗರ/ಹೊರವಲಯ/ಪುಷ್ಪಕ್/ಸುವರ್ಣ

ರೂ.2385/-

ರೂ.4695/-

ರೂ.5620/-

ಈ ಮೇಲಿನ ವಿಷಯವನ್ನು ತಮ್ಮ ಅಮೂಲ್ಯ ಜನಪ್ರಿಯ ದಿನಪತ್ರಿಕೆಯಲ್ಲಿ ವಿದ್ಯಾಸಮುದಾಯದ ಹಾಗೂ ಪೋಷಕರ ಮಾಹಿತಿಗಾಗಿ ಪ್ರಕಟಿಸಲು ಕೋರಲಾಗಿದೆ.

 

ವಂದನೆಗಳೊಂದಿಗೆ,                                                                         ತಮ್ಮ ವಿಶ್ವಾಸಿ,

                                                                                              ಪ್ರಧಾನ ವ್ಯವಸ್ಥಾಪಕರು (ಸಂಚಾರ)

                                                                                              ಬೆಂಮಸಾಸಂಸ್ಥೆ.

ಕನ್ನಡ